ಸೆಂಟ್ರಲ್ ಟೆಕ್ಸಾಸ್

ಪ್ರವಾಹದ ನಂತರ ಆಶ್ರಯ ಪಡೆಯುವುದು

ಟೆಕ್ಸಾಸ್‌ನ ಕೆರ್ವಿಲ್ಲೆನಲ್ಲಿರುವ ಹಿಲ್ ಕಂಟ್ರಿ ಪ್ರವಾಹ ಸ್ಮಾರಕ ಗೋಡೆ

"ಮುಂಜಾನೆ 5 ಗಂಟೆಗೆ, ಶೆರಿಫ್ ನಮ್ಮ ಬಾಗಿಲು ಬಡಿಯುವ ಶಬ್ದದಿಂದ ನಾವು ಎಚ್ಚರಗೊಂಡೆವು. ಬೀದಿಯಲ್ಲಿರುವ ಕೆಲವು ಮನೆಗಳು ಪ್ರವಾಹದಿಂದ ಸಂಪೂರ್ಣವಾಗಿ ಕೊಚ್ಚಿಹೋಗಿವೆ ಎಂದು ಅವರು ನಮಗೆ ತಿಳಿಸಿದರು."

- ಸ್ಕೈಲಿನ್, Airbnb.org ಗೆಸ್ಟ್

ಜುಲೈ 5, 2025 ರಂದು ಮುಂಜಾನೆ, ಸ್ಕೈಲಿನ್, ಆಕೆಯ ಸಂಗಾತಿ ಮತ್ತು 10 ತಿಂಗಳ ಮಗ ತಮ್ಮ ಮನೆಗೆ ನುಗ್ಗುತ್ತಿರುವ ನೀರಿನಿಂದ ಎಚ್ಚರಗೊಂಡರು. ಹಿಂದಿನ ರಾತ್ರಿ ಮಳೆ ಸುರಿಯುತ್ತಿತ್ತಷ್ಟೇ, ಆದರೆ ಈಗ ಅವರ ಮುಂಭಾಗದ ಹುಲ್ಲುಹಾಸು ಬೋರ್ಗರೆಯುತ್ತಿರುವ ನದಿಯಾಗಿತ್ತು. ದಾಖಲೆ ಮುರಿಯುವ ಪ್ರವಾಹದಿಂದಾಗಿ ಸೆಂಟ್ರಲ್ ಟೆಕ್ಸಾಸ್‌ನಾದ್ಯಂತ ಅವರ ನೆರೆಹೊರೆಯವರದ್ದೂ ಸೇರಿದಂತೆ ಸಂಪೂರ್ಣ ಮನೆಗಳು ಕೊಚ್ಚಿಹೋದವು'.

ಟೆಕ್ಸಾಸ್‌ನಲ್ಲಿ ಪ್ರವಾಹದ ನಂತರ, ನೀವು ಮರಗಳ ನಾಶವನ್ನು ನೋಡಬಹುದು.

ಕೂಡಲೇ ಸ್ಕೈಲಿನ್ ತನ್ನ ಕುಟುಂಬದೊಂದಿಗೆ ತೆರವುಗೊಳಿಸಲು ಪ್ರಯತ್ನಿಸಿದರೂ, ಆಕೆಯ ಟ್ರಕ್ ಮೂರು ಅಡಿಗೂ ಹೆಚ್ಚು ನೀರಿರುವ ಕೆಸರಿನಲ್ಲಿ ಸಿಲುಕಿ ಸಿಲುಕಿಕೊಂಡಿತು. ಪ್ರವಾಹದಿಂದ ಹಾನಿಗೊಳಗಾದವರಿಗೆ ಆಲ್ ಹ್ಯಾಂಡ್ಸ್ ಅಂಡ್ ಹಾರ್ಟ್ಸ್ ಮೂಲಕ Airbnb.org ಉಚಿತ, ತುರ್ತು ವಸತಿ ಒದಗಿಸುತ್ತಿದೆ ಎಂದು ಸ್ಕೈಲಿನ್ ತಿಳಿದುಕೊಂಡರು. ಅವರು ಕೂಡಲೇ ಸಂಪರ್ಕಿಸಿ ಹತ್ತಿರದಲ್ಲಿಯೇ ಉಳಿಯಲು Airbnb.org ಅನ್ನು ಬುಕ್ ಮಾಡಲು ಸಾಧ್ಯವಾಯಿತು. ಈ ಸ್ಥಳವು ಆಕೆಯ ಮಗನಿಗೆ ಆಡಲು ಸ್ಥಳಾವಕಾಶವನ್ನು ನೀಡಿತು ಮತ್ತು ಮುಂದಿನ ಹಂತಗಳನ್ನು ಯೋಚಿಸಲು ಅವಕಾಶ ಮಾಡಿಕೊಟ್ಟಿತು.

Airbnb. org ಗೆಸ್ಟ್ ಆಗಿರುವ ಸ್ಕೈಲಿನ್ ಅವರು ಪ್ರವಾಹದಿಂದ ಸ್ಥಳಾಂತರಿಸಲ್ಪಟ್ಟು Airbnb ಯಲ್ಲಿ ತನ್ನ 10 ತಿಂಗಳ ಮಗುವನ್ನು ಕುರ್ಚಿಯಲ್ಲಿ ಹಿಡಿದುಕೊಂಡಿದ್ದಾರೆ.

ಸ್ಕೈಲಿನ್ ಮತ್ತು ಅವರ ಮಗ ವೇಲನ್

"ಇಂತಹ ಒತ್ತಡದ ಸಮಯದಲ್ಲಿ ನನ್ನ ಮಗ ಖುಷಿಪಡುತ್ತಿರುವುದನ್ನು ನೋಡುವುದೇ ಒಂದು ದೊಡ್ಡ ನೆಮ್ಮದಿ."

- ಸ್ಕೈಲಿನ್, Airbnb.org ಗೆಸ್ಟ್

ಸೆಂಟ್ರಲ್ ಟೆಕ್ಸಾಸ್‌ನಾದ್ಯಂತ ಬಾಧಿತರಿಗೆ ಬೆಂಬಲ ನೀಡಲು ಪ್ರಥಮ ಪ್ರತಿಸ್ಪಂದಕರು, ಸ್ವಯಂಸೇವಕರು ಮತ್ತು ತುರ್ತು ತಂಡಗಳು ತ್ವರಿತವಾಗಿ ಸಜ್ಜುಗೊಂಡವು. ಪ್ರವಾಹ ಹಾನಿಗೊಳಗಾದ ಮನೆಗಳಿಂದ ಮಣ್ಣು, ಭಗ್ನಾವಶೇಷಗಳು ಮತ್ತು ಜಲಾವೃತ ವಸ್ತುಗಳನ್ನು ತೆರವುಗೊಳಿಸುವ ಮೂಲಕ ನಿವಾಸಿಗಳು ಚೇತರಿಸಿಕೊಳ್ಳಲು ಮತ್ತು ಪುನರ್ನಿರ್ಮಾಣಕ್ಕೆ ಸಿದ್ಧರಾಗಲು ಈ ತಂಡಗಳು ಇನ್ನೂ ಸಹಾಯ ಮಾಡುತ್ತಿವೆ.

ಆಲ್ ಹ್ಯಾಂಡ್ಸ್ ಅಂಡ್ ಹಾರ್ಟ್ಸ್ ಸ್ವಯಂಸೇವಕರ ಗುಂಪು ತಮ್ಮ Airbnb.org ವಾಸ್ತವ್ಯದ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ.

"30 ಅಡಿ ನೀರು ಹೇಗೆ ಕಾಣುತ್ತದೆ ಎಂಬುದನ್ನು ಗ್ರಹಿಸುವುದೇ ತುಂಬಾ ಕಷ್ಟ, ಅಂತಹದ್ದರಲ್ಲಿ ನಾವು 30 ಅಡಿ, ಅಕ್ಷರಶಃ ನೀರಿನ ಗೋಡೆಯಂತೆ ನದಿಯ ನೀರು ಹರಿದು ಬರುವ ಬಗ್ಗೆ ಮಾತನಾಡುತ್ತಿದ್ದೇವೆ."

- ಅಲಿಕ್ಸ್, Airbnb.org ಗೆಸ್ಟ್ ಮತ್ತು ಸ್ವಯಂಸೇವಕರು
ಟೆಕ್ಸಾಸ್‌ನ ಕೆರ್ವಿಲ್ಲೆನಲ್ಲಿರುವ ಹಿಲ್ ಕಂಟ್ರಿ ಪ್ರವಾಹ ಸ್ಮಾರಕ ಗೋಡೆ

ಅನೇಕ ಸ್ವಯಂಸೇವಕರು 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಹತ್ತಿರದಲ್ಲಿ ಉಳಿಯುವುದು ನಿರ್ಣಾಯಕವಾಗಿದೆ. Airbnb.org ಯಲ್ಲಿ 12 ಜನರವರೆಗಿನ ಸ್ವಯಂಸೇವಕ ಗುಂಪುಗಳಿಗೆ ಆಶ್ರಯ ಕಲ್ಪಿಸಲು ಸಾಧ್ಯವಾಗಿದೆ, ಇದರಿಂದಾಗಿ ಅವರು ಒಟ್ಟಿಗೆ ವಿಶ್ರಾಂತಿ ಪಡೆಯಬಹುದು, ಊಟ ಹಂಚಿಕೊಳ್ಳಬಹುದು ಮತ್ತು ದಣಿವಾರಿಸಿಕೊಳ್ಳಬಹುದು.Airbnb.org 350 ಕ್ಕೂ ಹೆಚ್ಚು ಗೆಸ್ಟ್‌ಗಳಿಗೆ ಸೆಂಟ್ರಲ್ ಟೆಕ್ಸಾಸ್‌ನಲ್ಲಿ ಉಚಿತ, ತುರ್ತು ವಸತಿ ಒದಗಿಸಿದೆ.

ತೊಡಗಿಸಿಕೊಳ್ಳಿ

ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುತ್ತಿರುವ ಜಾಗತಿಕ ಜನ ಸಮುದಾಯಕ್ಕೆ ಸೇರಿಕೊಳ್ಳಿ.

ಇನ್ನಷ್ಟು ತಿಳಿಯಿರಿ

ಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ

ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.