ಕಾಡ್ಗಿಚ್ಚಿನ ನಂತರ ಸಮುದಾಯಗಳನ್ನು ಸಂಪರ್ಕಿಸುವುದು

ಚೇತರಿಕೆ ಪ್ರಾರಂಭವಾಗುತ್ತಿದ್ದಂತೆ, ಲಾಸ್ ಏಂಜಲೀಸ್‌ನಾದ್ಯಂತ ಜನರು ಪರಸ್ಪರ ಸಹಾಯ ನೀಡುವುದನ್ನು ಮುಂದುವರಿಸಿದ್ದಾರೆ.
ದೇಣಿಗೆ ನೀಡಿ

ಕಾಡ್ಗಿಚ್ಚಿನ ನಂತರ ಸಮುದಾಯಗಳನ್ನು ಸಂಪರ್ಕಿಸುವುದು

ಚೇತರಿಕೆ ಪ್ರಾರಂಭವಾಗುತ್ತಿದ್ದಂತೆ, ಲಾಸ್ ಏಂಜಲೀಸ್‌ನಾದ್ಯಂತ ಜನರು ಪರಸ್ಪರ ಸಹಾಯ ನೀಡುವುದನ್ನು ಮುಂದುವರಿಸಿದ್ದಾರೆ.
ದೇಣಿಗೆ ನೀಡಿ
ಮೂವರ ಕುಟುಂಬ ಮತ್ತು ಅವರ ನಾಯಿ, ತಾಯಿ ಮತ್ತು ಮಗ ಮತ್ತು ಮನೆಯ ಹೊರಗೆ ನಿಂತಿರುವ ದಂಪತಿಗಳಿರುವ ಕೊಲಾಜ್.
ಅಲ್ಟಾಡೆನಾ

ಬೆನ್ ಕುಟುಂಬ

ಅಲ್ಟಾಡೆನಾದ ಸಂಗೀತ ಕುಟುಂಬ ಎಂದು ಕರೆಯಲ್ಪಡುವ ಬೆನ್ಸ್ 1950 ರ ದಶಕದಿಂದಲೂ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪಟ್ಟಣದ ಸುತ್ತಲಿನ ಸಮುದಾಯ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಪ್ರದರ್ಶನ ನೀಡುತ್ತಾರೆ. ಪೀಳಿಗೆಗಳಿಂದ ಒಡೆತನದಲ್ಲಿದ್ದ ಎರಡು ಮನೆಗಳನ್ನು ಈಟನ್ ಕಾಡ್ಗಿಚ್ಚು ಸುಟ್ಟು ಭಸ್ಮ ಮಾಡಿತು. ಮುಂದೇನು ಎಂಬುದರ ಕುರಿತು ಯೋಚಿಸುವಾಗ ಕುಟುಂಬದ ಹನ್ನೊಂದು ಸದಸ್ಯರು Airbnb ಯಲ್ಲಿ ಒಟ್ಟಿಗೆ ಉಳಿಯಲು ಸಾಧ್ಯವಾಯಿತು. "ಒಂದೇ ಮನೆಯಲ್ಲಿ ವಾಸಿಸುವುದು ಈ ಸಮಯದಲ್ಲಿ ಬಹು ಮುಖ್ಯವಾಗಿತ್ತು, ಅದರಲ್ಲೂ ವಿಶೇಷವಾಗಿ ನಮ್ಮ ಕುಟುಂಬದಲ್ಲಿ ಚಲನಶೀಲತೆ ಸಮಸ್ಯೆಗಳಿರುವವರು ಮತ್ತು ಚಿಕ್ಕ ಮಕ್ಕಳಿದ್ದರು" ಎಂದು ಬೆನ್ ಕುಟುಂಬದ ಏಳು ಮಕ್ಕಳಲ್ಲಿ ಹಿರಿಯರಾದ ಲೊರೆನ್ ಬೆನ್ ಹೇಳಿದರು. ಬೆನ್ ಕುಟುಂಬ ಅಲ್ಟಾಡೆನಾಕ್ಕೆ ಹಿಂತಿರುಗಲು ಮತ್ತು ಅವರ ಸಮುದಾಯದೊಂದಿಗೆ ಮರುಸಂಪರ್ಕಿಸಲು ಯೋಜಿಸಿದ್ದಾರೆ.
ಮಕ್ಕಳು, ಪೋಷಕರು ಮತ್ತು ಅಜ್ಜ ಅಜ್ಜಿಯರನ್ನೊಳಗೊಂಡ 11 ಜನರ ಕುಟುಂಬ ಸೂರ್ಯನ ಬೆಳಕಿನಲ್ಲಿ ಹಿತ್ತಲಿನಲ್ಲಿ ಕೆಲವರು ನಿಂತಿದ್ದರೆ ಕೆಲವರು ಕುಳಿತಿದ್ದಾರೆ.
"ಮನೆಯನ್ನು ಕಳೆದುಕೊಳ್ಳುವುದು ಒಂದು ವಿಷಯ. ಪರಂಪರೆಯ ಒಂದು ಭಾಗವನ್ನೇ ಕಳೆದುಕೊಂಡ ಭಾವನೆ ಮತ್ತೊಂದು," ಎಂದು ಲೊರೆನ್ ಹೇಳುತ್ತಾರೆ.
ಅಲ್ಟಾಡೆನಾ

ಎಶೆಲ್‌ ಮತ್ತು ಬ್ರೇಡನ್‌

ಎಶೆಲ್ ಅವರು ಥೆರಪಿಸ್ಟ್ ಆಗಿದ್ದು, ಅವರ ಕುಟುಂಬವು ಪೀಳಿಗೆಯಿಂದ ಅಲ್ಟಾಡೆನಾದಲ್ಲಿ ವಾಸಿಸುತ್ತಿದೆ. ಅವರು, ಅವರ ಮಗ ಬ್ರೇಡೆನ್ ಮತ್ತು ಅವರ ಚಿವಾವಾ, ಕಿಂಗ್ ಟುಟ್ ತಮ್ಮ 17 ವರ್ಷಗಳ ಮನೆಯನ್ನು ಕಳೆದುಕೊಂಡರು. Airbnb.org ಕ್ರೆಡಿಟ್‌ಗಳನ್ನು ಬಳಸಿಕೊಂಡು ಅವರು Airbnb ಹೋಸ್ಟ್ ಇನೆಸ್ಸಾ ಅವರೊಂದಿಗೆ ವಾಸ್ತವ್ಯ ಹೂಡಿದರು. ತಮ್ಮ ನಷ್ಟದ ಹೊರತಾಗಿಯೂ, ಎಶೆಲ್ ತನ್ನ ಸಮುದಾಯಕ್ಕೆ ನಿರ್ಣಾಯಕ ಸಮಯದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸಿದ್ದಾರೆ.
ಹಸಿರು ಸ್ವೆಟರ್ ಧರಿಸಿರುವ ತಾಯಿ ಮತ್ತು ಕಪ್ಪು ಸ್ವೆಟ್‌ಶರ್ಟ್ ಧರಿಸಿರುವ ಅವರ ಮಗ ಪರಸ್ಪರ ಅಪ್ಪಿಕೊಂಡಿದ್ದಾರೆ ಮತ್ತು ಚಿವಾವಾ ಅವರ ಮುಂದೆ ನಿಂತಿದೆ.
"ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಯಾರಾದರೂ ಇದ್ದು, ನಿಮ್ಮನ್ನು ಕುಟುಂಬದವರಂತೆ ಸ್ವಾಗತಿಸಿದಾಗ ಆಗುವ ಅನುಭವ ಹೇಳತೀರದು" ಎಂದು ಎಶೆಲ್ ಹೇಳಿದರು.
ಅಲ್ಟಾಡೆನಾ

ಕೆವಿನ್‌, ಬ್ರಿಜೆಟ್‌ ಮತ್ತು ಕೋಪಿ

ಕೆವಿನ್ ಮತ್ತು ಬ್ರಿಜೆಟ್ ತಮ್ಮ 10 ವರ್ಷದ ಮಗ ಕೋಪರ್ನಿಕಸ್ ಮತ್ತು ನಾಯಿ ಗ್ಯಾಲಕ್ಸಿಯೊಂದಿಗೆ ಆಲ್ಟಾಡೆನಾದಲ್ಲಿ ವಾಸಿಸುವ ಕಲಾವಿದರು ಮತ್ತು ಛಾಯಾಗ್ರಾಹಕರಾಗಿದ್ದಾರೆ. ಕುಟುಂಬವು ತಮ್ಮ ಮನೆ ಮತ್ತು ಮಾಡಿದ ಬಹುತೇಕ ಕೆಲಸವನ್ನು ಕಳೆದುಕೊಂಡಿತು, ಆದರೆ ಅವರು ತಮ್ಮ ಸಮುದಾಯವನ್ನು ಒಟ್ಟಾಗಿ ಇಟ್ಟುಕೊಳ್ಳುವ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಅವರು ತಮ್ಮ ಯೋಜನೆಗಳನ್ನು ತಯಾರಿಸುವಾಗ Airbnb ಯಲ್ಲಿ ಉಚಿತವಾಗಿ ಉಳಿದುಕೊಂಡಿದ್ದಾರೆ.
ಗಾರೆ ಮನೆಯ ಮುಂಭಾಗದ ಮುಖಮಂಟಪದಲ್ಲಿ ಕ್ಯಾಮೆರಾ ಹಿಡಿದಿರುವ ವ್ಯಕ್ತಿ, ನಾಯಿಯನ್ನು ಹಿಡಿದಿರುವ ಮಹಿಳೆ ಮತ್ತು ಅವರ ಮಗ ಒಟ್ಟಿಗೆ ನಿಂತಿದ್ದಾರೆ.
"ಮುಂದಿನದನ್ನು ಹೇಗೆ ನಿಭಾಯಿಸುವುದು ಎಂಬ ಕುರಿತು ಒಂದು ನಿಮಿಷ ಕುಳಿತು ಯೋಚಿಸಲು ನಾವು ಈ ಕ್ಷಣವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಕೆವಿನ್ ಹೇಳಿದರು.
ಥೌಸಂಡ್ ಓಕ್ಸ್

ಸನಮ್ ಮತ್ತು ಕುಟುಂಬ

ಕಾಡ್ಗಿಚ್ಚಿನಲ್ಲಿ ತನ್ನ ಕುಟುಂಬವು ಹಲವಾರು ಬಾಡಿಗೆ ಪ್ರಾಪರ್ಟಿಗಳನ್ನು ಕಳೆದುಕೊಂಡ ನಂತರವೂ ಸನಮ್, ವೆಂಚುರಾದ ಎಂಟು ಅಗ್ನಿಶಾಮಕ ಸಿಬ್ಬಂದಿಯನ್ನು ಮತ್ತು ಅವರ ನಾಲ್ಕು K9 ಗಳನ್ನು ಹೋಸ್ಟ್ ಮಾಡಿದರು. ಅಗ್ನಿಶಾಮಕ ದಳ ಕೆಲಸ ಮಾಡುವುದಕ್ಕೆ ಸಾಕಷ್ಟು ಶಕ್ತಿ ಪಡೆಯಲೆಂದು, ಸನಮ್‌ರ 3, 5, 6, ಮತ್ತು 9-ವಯಸ್ಸಿನ ಮಕ್ಕಳು ಅವರಿಗೆ ಆಹಾರ ಮತ್ತು ಸರಬರಾಜುಗಳನ್ನು ತರಲು Costco ಗೆ ಹೋಗಿ ಬರುವುದನ್ನು ನಿರ್ವಹಿಸಿದರು. 
ಉದ್ದನೆಯ ಕಪ್ಪು ಕೂದಲಿನ ಮಹಿಳೆಯೊಬ್ಬರು ತಮ್ಮ ಮಡಿಲಿನಲ್ಲಿ ಮಗಳನ್ನು ಕುಳ್ಳಿರಿಸಿಕೊಂಡು ಬಿಸಿಲಿಗೆ ಹಸಿರು ಚಪ್ಪರವಿರುವ ಒಳಾಂಗಣದಲ್ಲಿ ಕುಳಿತಿದ್ದಾರೆ.
"ತಮ್ಮ ಶಕ್ತಿಯನ್ನು ಮರಳಿ ಪಡೆಯಲು ಮತ್ತು ಬೆಂಕಿಯ ವಿರುದ್ಧ ಹೋರಾಡಲು ಒಂದು ಗುಂಪಿಗೆ ಸಹಾಯ ಮಾಡಿದ್ದು ತುಂಬಾ ಹೆಮ್ಮೆಯೆನಿಸುತ್ತದೆ" ಎಂದು ಸನಮ್ ಹೇಳಿದರು.
ಪಾಮ್ ಮರುಭೂಮಿ

ಜಿಮ್ಮಿ

ಪಾಮ್ ಮರುಭೂಮಿಯಲ್ಲಿ ಹುಟ್ಟಿ ಬೆಳೆದ ಹೋಸ್ಟ್ ಜಿಮ್ಮಿ LA ಕಾಡ್ಗಿಚ್ಚಿನಿಂದ ಪ್ರಭಾವಿತರಾದ ಗೆಸ್ಟ್‌ಗಳನ್ನು ಬೆಂಬಲಿಸಲು ತಮ್ಮ ಸಮುದಾಯವನ್ನು ಒಟ್ಟುಗೂಡಿಸಿದ್ದಾರೆ. ಮೊದಲ ವಾರ ಅವರು ಸ್ಥಳಾಂತರಗೊಂಡಿದ್ದ ಒಂಬತ್ತು ಕುಟುಂಬಗಳಿಗೆ ಆಶ್ರಯ ನೀಡಿದರು. ಮನೆಯನ್ನು ಕಳೆದುಕೊಂಡ ಒಂದು ಕುಟುಂಬಕ್ಕೆ, ಅವರು ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಕಾಫಿ ಅಂಗಡಿಗಳಿಗೆ ಉಡುಗೊರೆ ಕಾರ್ಡ್‌ಗಳ ರೂಪದಲ್ಲಿ ದೇಣಿಗೆಗಳನ್ನು ಸಂಗ್ರಹಿಸಿದರು.
ಗಾಢ ಜೀನ್ಸ್ ಧರಿಸಿರುವ ಕಂದು ಕೂದಲಿನ ವ್ಯಕ್ತಿಯೊಬ್ಬರು ಉದ್ಯಾನದಲ್ಲಿ ಜಲ ಸಸ್ಯಗಳೊಂದಿಗೆ ಗಾರೆ ಮನೆಯ ಮುಂದೆ ಲೌಂಜ್ ಕುರ್ಚಿಯ ಮೇಲೆ ಕುಳಿತಿದ್ದಾರೆ.
"ಅವರು ತಮ್ಮ ಮನೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಕ್ಷಣ ಮಾತ್ರದಲ್ಲಿ ಸ್ಥಳಾಂತರಗೊಳ್ಳಬೇಕಾಯಿತೆಂದು ನನಗೆ ಅತೀವ ದುಃಖವಾಯಿತು. ಇವರು ನನ್ನ ಮನೆಯಲ್ಲಿ ಆರಾಮದಾಯಕವಾಗಿರಬೇಕು ಮತ್ತು ಈ ಸಮುದಾಯವು ಈ ನೆರೆಹೊರೆಯಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ ಎಂದು ಅವರು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ,"ಎಂದು ಜಿಮ್ಮಿ ಹೇಳಿದರು.
ಲಾಂಗ್ ಬೀಚ್

ಕೈಟ್ಲಿನ್

ಅಲ್ಟಾಡೆನಾದಲ್ಲಿ ತಮ್ಮ ಮನೆಯನ್ನು ಕಳೆದುಕೊಂಡಾಗ 39 ವಾರಗಳ ಗರ್ಭಿಣಿಯಾಗಿದ್ದ ಒಬ್ಬ ತಾಯಿಯ ಕುಟುಂಬವೂ ಸೇರಿದಂತೆ, ಕಾಡ್ಗಿಚ್ಚಿನಿಂದ ಬಾಧಿತರಾದ ಗೆಸ್ಟ್‌ಗಳಿಗೆ ಸಹಾಯ ಮಾಡಲು ಲಾಂಗ್ ಬೀಚ್ ಹೋಸ್ಟ್ ಕೈಟ್ಲಿನ್ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ದಾನ ಬಂದ ಸರಕುಗಳು ಮತ್ತು ಆರೈಕೆ ಪ್ಯಾಕೇಜ್‌ಗಳನ್ನು ಕೈಟ್ಲಿನ್ ಗೆಸ್ಟ್‌ಗಳಿಗೆ ತಂದರು ಮತ್ತು ವಸತಿ ಅಗತ್ಯವಿರುವ ಹೆಚ್ಚಿನ ಜನರನ್ನು ಬೆಂಬಲಿಸಲು ತನ್ನ ಹೋಸ್ಟ್ ನೆಟ್‌ವರ್ಕ್‌ನೊಂದಿಗೆ ಈಗಲೂ ಸಂವಹನ ನಡೆಸುತ್ತಿದ್ದಾರೆ.
ಬಿಳಿ ಶರ್ಟ್ ಧರಿಸಿರುವ ಉದ್ದನೆಯ ಕಂದು ಕೂದಲಿನ ಮಹಿಳೆಯೊಬ್ಬರು ಮೀನಿನ ವಾಲ್‌ಪೇಪರ್ ಹೊಂದಿರುವ ಗೋಡೆಯ ಮುಂದೆ ಹಸಿರು ಸೋಫಾದ ಮೇಲೆ ಕುಳಿತಿದ್ದಾರೆ.
"ಎರಡು ವಾರಗಳಲ್ಲಿ ಜಗತ್ತು ಮುಂದೆ ಸಾಗಿರುತ್ತದೆ, ಆದರೆ ಇವರು ಮುಂದೆ ಸಾಗಿರುವುದಿಲ್ಲ. ಅವರಿಗೆ ಇನ್ನೂ ಹೆಚ್ಚಿನ ಸಹಾಯ ಬೇಕಾಗಿದೆ,”ಎಂದು ಕೈಟ್ಲಿನ್ ಹೇಳಿದರು.

LA ನಿಂದ ಇನ್ನಷ್ಟು ಕಥೆಗಳು

"ನನ್ನ ಕುಟುಂಬವನ್ನು ಆರಾಮದಾಯಕವಾಗಿರಿಸುವುದು ನನ್ನ ಅತಿದೊಡ್ಡ ಪ್ರೇರಣೆ, ಇದರಿಂದ ಅವರು ಒಂದು ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಬಹುದು, ಮುಂದೆ ಅದು ಹೇಗಾದರೂ ಆಗಲಿ."

-ಲೋರೆನ್, ಅಲ್ಟಾಡೆನಾ, CA ನಿಂದ Airbnb.org ಗೆಸ್ಟ್

"ನಮ್ಮ ಮನೆಯ ಬಗ್ಗೆ ನಾವು ನಂಬಲಾಗದಷ್ಟು ಅನಿಶ್ಚಿತರಾಗಿದ್ದಾಗ ಸುರಕ್ಷಿತವಾಗಿರುವುದು ಮತ್ತು ತಲೆಯ ಮೇಲೆ ಸೂರನ್ನು ಹೊಂದಿರುವುದು ಅತ್ಯಂತ ನೆಮ್ಮದಿಯೆನಿಸಿತ್ತು."

-ಕೇಟ್, ಟೊಪಾಂಗಾ, CA ನಿಂದ Airbnb.org ಗೆಸ್ಟ್

ಇಂದೇ ನೀಡಿ

100% ನೇರವಾಗಿ ವಸತಿಗೆ ಅನುದಾನ ಮಾಡುತ್ತದೆ.

ನೀವು ನೀಡುವ ಯಾವುದೇ ಮೊತ್ತವು ಸಂಕಷ್ಟದ ಸಮಯದಲ್ಲಿ ಜನರಿಗೆ ತುರ್ತು ವಸತಿ ಅನುದಾನಕ್ಕೆ ನೇರವಾಗಿ ಹೋಗುತ್ತದೆ.

Airbnb ಸಹ ದೇಣಿಗೆ ನೀಡುತ್ತಿದೆ

Airbnb ಎಲ್ಲಾ Airbnb.org ಕಾರ್ಯಾಚರಣೆಯ ವೆಚ್ಚಗಳನ್ನು ಹೊತ್ತೊಯ್ಯುತ್ತಿದ್ದು ಪ್ರತಿ ತುರ್ತು ವಾಸ್ತವ್ಯಕ್ಕೆ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡುತ್ತದೆ.

ಗೆಸ್ಟ್‌ಗಳು ಉಚಿತವಾಗಿ ವಾಸ್ತವ್ಯ ಹೂಡಬಹುದು

ಅನೇಕ ಹೋಸ್ಟ್‌ಗಳು ರಿಯಾಯಿತಿ ದರದಲ್ಲಿ ತಮ್ಮ ಮನೆಗಳನ್ನು ನೀಡುತ್ತಾರೆ. ದೇಣಿಗೆಗಳು ಉಳಿದವನ್ನು ಸರಿದೂಗಿಸಲು ಸಹಾಯ ಮಾಡುತ್ತವೆ.