ಪ್ರವಾಹದ ನಂತರ ಸಾಕುಪ್ರಾಣಿ-ಸ್ನೇಹಿ ಆಶ್ರಯ

"ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು."
ಮಾರ್ಚ್ 20, 2026 ರ ಮಧ್ಯರಾತ್ರಿ ಕಳೆದು ಸ್ವಲ್ಪ ಸಮಯದ ನಂತರ ಮೈಲೆ ಮತ್ತು ಕಾಯ್ ಎಚ್ಚರಗೊಂಡಾಗ ಚಂಡಮಾರುತ ಆರ್ಭಟಿಸುತ್ತಿತ್ತು. ತಮ್ಮ ವಾಹನಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ಅವರು ಎದ್ದರು. ಆದರೆ ತಮ್ಮ ಜೀವನದಲ್ಲಿ ಬೇಕಾಗುವ ವಸ್ತುಗಳನ್ನು ಸಾಧ್ಯವಾದಷ್ಟು ಬೇಗ ಸಿದ್ಧಪಡಿಸಿಕೊಂಡು ಅಲ್ಲಿಂದ ಪಾರಾಗಲು ತಮ್ಮ ಬಳಿ 30 ನಿಮಿಷಕ್ಕೂ ಕಡಿಮೆ ಸಮಯ ಇದೆ ಎಂಬುದು ಅವರಿಗೆ ತಿಳಿದಿರಲಿಲ್ಲ.
"ನಮಗೆ ಹೊರಬರಲು ಕೇವಲ 10 ನಿಮಿಷಗಳ ಸಮಯವಿತ್ತಷ್ಟೇ."

ಇಡೀ ಬಳಗವನ್ನು ಒಟ್ಟಾಗಿ ಉಳಿಸಿಕೊಳ್ಳುವುದುನೀರು ಕ್ಷಣಾರ್ಧದಲ್ಲೇ ವೇಗವಾಗಿ ಹರಿದುಬಂತು. ಭೋರ್ಗರೆತ ನಿಲ್ಲುವ ಲಕ್ಷಣವೇ ಇಲ್ಲ ಎಂದು ಅವರು ಅರಿತ ಕ್ಷಣದಲ್ಲಿ, ಮೈಲೆ ಮತ್ತು ಕಾಯ್ ತಮ್ಮ ಪ್ರೀತಿಯ “ವುಲ್ಫ್‌ಪ್ಯಾಕ್”ನೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ತುರ್ತಾಗಿ ಹೊರಟರು. ಮೈಲೆ ತಮ್ಮ ಐದು ನಾಯಿಗಳಾದ ಬ್ಲ್ಯಾಕಿ, ಟೈನಿ, ನೋಯೆಲ್, ಸ್ಯಾಸಿ ಮತ್ತು ಚೊಂಚೊವನ್ನು ಪ್ರೀತಿಯಿಂದ ವುಲ್ಫ್‌ಪ್ಯಾಕ್ ಎಂದು ಕರೆಯುತ್ತಾರೆ. ಅವುಗಳನ್ನು ಬಿಟ್ಟು ಹೋಗುವ ಪ್ರಮೇಯವೇ ಇರಲಿಲ್ಲ.“ನಾವು ಬಟ್ಟೆಗಳ ಚೀಲವನ್ನು ಎತ್ತಿಕೊಳ್ಳುವ ಮುನ್ನ ನಾಯಿಗಳನ್ನು ಎತ್ತಿಕೊಂಡೆವು. ನಾಯಿಗಳು ನಮ್ಮ ಮೊದಲ ಆದ್ಯತೆಯಾಗಿದ್ದವು." - ಕಾಯ್ಮೈಲೆ ಮತ್ತು ಕಾಯ್ ಐದೂ ನಾಯಿಗಳೊಂದಿಗೆ ವಾಹನವನ್ನು ಹತ್ತಿ ಕೂರುವಷ್ಟರಲ್ಲಿ, ಪ್ರವಾಹದ ನೀರು ಅವರ ಕಾರ್‌ನ ಬಾನೆಟ್‌ನ ಮಟ್ಟ ತಲುಪಿತ್ತು ಮತ್ತು ಪ್ರಬಲವಾದ ಪ್ರವಾಹ ಅವರನ್ನು ಪಕ್ಕಕ್ಕೆ ತಳ್ಳತೊಡಗಿತ್ತು. ಎಲ್ಲಾ ಅಡೆತಡೆಗಳ ಹೊರತಾಗಿಯೂ, ಕಾಯ್ ಮತ್ತು ಮೈಲೆ ಪ್ರವಾಹವನ್ನು ದಾಟಿ ಸುರಕ್ಷಿತ ರಸ್ತೆಯನ್ನು ತಲುಪುವಷ್ಟು ಸಮಯದವರೆಗೆ ವಾಹನದ ಎಂಜಿನ್ ಕಾರ್ಯನಿರ್ವಹಿಸಿತು. ಅದರ ನಂತರ ಅವರ ಮುಂದೆ ಉಳಿದಿದ್ದು ಸುರಕ್ಷತೆ ಮತ್ತು ಅನಿಶ್ಚಿತತೆಯೇ.
ತಾತ್ಕಾಲಿಕ ಆಶ್ರಯ… ಅವರಿಗೆ ಮಾತ್ರವಲ್ಲ, ಅವರ ಪ್ರೀತಿಯ ನಾಯಿಗಳಿಗೂಚಂಡಮಾರುತದ ನಂತರ ಗವರ್ನರ್ ಜೋಶ್ ಗ್ರೀನ್ ಈ ಘಟನೆಯನ್ನು 2004 ರ ನಂತರ ಹವಾಯಿಯಲ್ಲಿ ಸಂಭವಿಸಿದ ಅತ್ಯಂತ ತೀವ್ರವಾದ ಪ್ರವಾಹ ಎಂದು ವಿವರಿಸಿದರು.ಮರುದಿನ ಮೈಲೆ ಮತ್ತು ಕಾಯ್ ಹಾಲೆವಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ, ತಮ್ಮ ಮನೆಯು ಹಲವು ಅಡಿ ನೀರಿನಲ್ಲಿ ಮುಳುಗಿರುವುದನ್ನು ಕಂಡುಕೊಂಡರು. ಹಾನಿಯು ಗಣನೀಯವಾಗಿತ್ತು ಮತ್ತು ವಿನಾಶಕಾರಿಯಾಗಿತ್ತು.

ಬೆಂಬಲಕ್ಕಾಗಿ ಮೈಲೆ ಮತ್ತು ಕಾಯ್ ತಮ್ಮ ಸಮುದಾಯದ ಮೇಲೆ ಅವಲಂಬಿತರಾದರು. ತಮ್ಮ ಮನೆಯಲ್ಲಿ ತಂಗಲು ಸಾಧ್ಯವಾಗದೆ, ದಂಪತಿಗಳು ತಮ್ಮ ತಲೆಯ ಮೇಲೆ ಸೂರಿಗಾಗಿ ಮತ್ತು ತಮ್ಮ ಪ್ರಾಣಿಗಳನ್ನು ನೋಡಿಕೊಳ್ಳಲು ಸಹಾಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರನ್ನು ಅವಲಂಬಿಸಿದರು. ಕೊನೆಗೆ, ಅವರು Airbnb.org ಮೂಲಕ ಗೌಪ್ಯತೆ ಮತ್ತು ಪರಿಹಾರವನ್ನು ಕಂಡುಕೊಂಡರು. ಅವರು ಉಚಿತ ವಸತಿಯನ್ನು ಬುಕ್ ಮಾಡಿಕೊಂಡರು. ಇದರಿಂದ ಅವರ ಕುಟುಂಬ ಒಟ್ಟಿಗೆ, ಸುರಕ್ಷಿತವಾಗಿ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಯಿತು.“ನಮ್ಮ ಸುರಕ್ಷತೆ ಮತ್ತು ನಮ್ಮ ನಾಯಿಗಳ ನಡುವೆ ಒಂದನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಎದುರಾಗಲಿಲ್ಲ ಎಂಬುದನ್ನು ತಿಳಿದು ತುಂಬಾ ಸಂತೋಷವಾಯಿತು. ನಮಗೆ ಎರಡೂ ದೊರಕಿದವು. ನಮ್ಮ ನಾಯಿಗಳೊಡಗೂಡಿ ನಮ್ಮ ಇಡೀ ಕುಟುಂಬವೇ ಜೊತೆಗಿರಲು ಸಾಧ್ಯವಾಯಿತು. ಈ ಅನುಭವ ನಿಜಕ್ಕೂ ಅದ್ಭುತ.” - ಕಾಯ್

ತಮ್ಮ ಹೋಸ್ಟ್‌ನ ಗೌರವಾರ್ಥವಾಗಿ, ಮೈಲೆ ಮತ್ತು ಕಾಯ್ ತಮ್ಮ ಐದು ನಾಯಿಗಳಲ್ಲಿ ಮೂರನ್ನು ಮಾತ್ರ ತಮ್ಮ Airbnb.org ವಾಸ್ತವ್ಯಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಅವರ ವುಲ್ಫ್‌ಪ್ಯಾಕ್‌ನ ಇಬ್ಬರು ಸದಸ್ಯರನ್ನು ಆಪ್ತ ಸ್ನೇಹಿತರು ನೋಡಿಕೊಂಡರು.
ಸಾಕುಪ್ರಾಣಿ-ಸ್ನೇಹಿ ವಾಸ್ತವ್ಯಗಳ ಮೌಲ್ಯಮೈಲೆಗೆ, ತಮ್ಮ Airbnb.org ವಾಸ್ತವ್ಯದಲ್ಲಾಗಲಿ ಅಥವಾ ಕುಟುಂಬದೊಂದಿಗಾಗಲಿ, ತಮ್ಮ ನಾಯಿಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದ್ದು, ಚಂಡಮಾರುತದಿಂದ ಪಾರಾದ ನಂತರದ ಆಘಾತದಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲು ಅತ್ಯಂತ ಮುಖ್ಯವೆನಿಸಿತು.“ಈ ವಾಸ್ತವ್ಯವು ಒಂದು ವರವಾಗಿ ಬಂದಿತು. ನಾನು ಎಂದಾದರೂ ನನ್ನ ನಾಯಿಗಳಿಂದ ಬೇರ್ಪಟ್ಟಿದ್ದರೆ, ತಡೆಯಲಾರದ ಆಘಾತಕ್ಕೊಳಗಾಗುತ್ತಿದ್ದೆ. ಅವುಗಳು ನನ್ನಿಂದ ದೂರಾದರೆ ನನಗೆ ತಡೆದುಕೊಳ್ಳಲು ಸಾಧ್ಯವಿಲ್ಲ." - ಮೈಲೆ

ಉದಾರ ದಾನಿಗಳು ಮತ್ತು ಹೋಸ್ಟ್‌ಗಳ ಬೆಂಬಲದಿಂದಾಗಿ ನೈಸರ್ಗಿಕ ವಿಪತ್ತುಗಳು ಮತ್ತು ಇತರ ಬಿಕ್ಕಟ್ಟುಗಳ ಸಮಯದಲ್ಲಿ ಕುಟುಂಬಗಳನ್ನು ಒಟ್ಟಿಗೆ ಇರಿಸುವ ಸಾಕುಪ್ರಾಣಿ-ಸ್ನೇಹಿ ತುರ್ತು ವಸತಿಯನ್ನು ಒದಗಿಸಲು Airbnb.org ಗೆ ಸಾಧ್ಯವಾಗಿದೆ. ಮೈಲೆ ಮತ್ತು ಕಾಯ್ ಅವರಂತಹ ಕುಟುಂಬಗಳು.ಮಾರ್ಚ್‌ನ ಚಳಿಗಾಲದ ಚಂಡಮಾರುತಗಳ ಹಿನ್ನೆಲೆಯಲ್ಲಿ ಒಟ್ಟು 5,500 ಜನರಿಗೆ ಓಹುವಿನ ಉತ್ತರ ಕರಾವಳಿಯಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಯಿತು. Airbnb.org 220 ಕ್ಕೂ ಹೆಚ್ಚು ಗೆಸ್ಟ್‌ಗಳಿಗೆ ಒಟ್ಟು 597 ರಾತ್ರಿಗಳ ಉಚಿತ ತುರ್ತು ವಸತಿಯನ್ನು ಒದಗಿಸಿತು“Airbnb.org ನಮ್ಮ ಸಮುದಾಯದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿರುವ ಬಹಳಷ್ಟು ಜನರಿಗೆ ಸಹಾಯ ಮಾಡಿದೆ.” - ಕಾಯ್
ತೊಡಗಿಸಿಕೊಳ್ಳಿ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುತ್ತಿರುವ ಜಾಗತಿಕ ಜನ ಸಮುದಾಯಕ್ಕೆ ಸೇರಿಕೊಳ್ಳಿ.
ಇನ್ನಷ್ಟು ತಿಳಿಯಿರಿಪ್ರತಿ ವಾಸ್ತವ್ಯಕ್ಕೂ ಒಂದು ಕಥೆಯಿದೆ
ವಿಪತ್ತುಗಳಿಂದ ಬಾಧಿತರಾದವರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.



