ನಿಮ್ಮ Airbnb.org ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ನೈಸರ್ಗಿಕ ವಿಪತ್ತುಗಳು ಮತ್ತು ಬಿಕ್ಕಟ್ಟಿನ ಇತರ ಸಮಯಗಳಲ್ಲಿ Airbnb.org ಜನರಿಗೆ ಉಚಿತ, ತುರ್ತು ವಸತಿ ಒದಗಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ನಮ್ಮ ಪ್ರೋಗ್ರಾಂನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ, ಆದ್ದರಿಂದ ಹೋಸ್ಟ್‌ಗಳು ನಮ್ಮನ್ನು ಕೇಳುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತಿದ್ದೇವೆ.
ಲಾರಾ, Airbnb.org ಹೋಸ್ಟ್

Airbnb.org ಹೇಗೆ ಕೆಲಸ ಮಾಡುತ್ತದೆ?

ನೈಸರ್ಗಿಕ ವಿಪತ್ತಿನಂತಹ ಬಿಕ್ಕಟ್ಟಿನ ಸಮಯದಲ್ಲಿ ಅಥವಾ ಜೀವ ರಕ್ಷಕ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣಿಸುವಾಗ, Airbnb.org ಅಗತ್ಯವಿರುವ ನೆರೆಹೊರೆಯವರನ್ನು ಉಚಿತ, ತುರ್ತು ವಸತಿಗೆ ಸಂಪರ್ಕಿಸುತ್ತದೆ.
ತೊಡಗಿಸಿಕೊಳ್ಳಿ

Airbnb.org ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವುದು.

ಹೋಸ್ಟ್‌ಗಳು ಇನ್ನೂ ಪಾವತಿ ಪಡೆಯುತ್ತಾರೆಯೇ? 

ಹೌದು, ಅಗತ್ಯವಿರುವ ಜನರಿಗೆ ತುರ್ತು ವಾಸ್ತವ್ಯಗಳಿಗಾಗಿ Airbnb.org ಪಾವತಿಸುವುದರಿಂದ ಹೋಸ್ಟ್‌ಗಳು ಇತರ ಯಾವುದೇ ವಾಸ್ತವ್ಯದಂತೆಯೇ ಪಾವತಿಯನ್ನು ಸ್ವೀಕರಿಸುತ್ತಾರೆ.

Airbnb.org ಗೆಸ್ಟ್‌ಗಳನ್ನು ಹೋಸ್ಟ್ ಮಾಡಲು ನಾನು ಸೈನ್ ಅಪ್ ಮಾಡಬೇಕೇ?

ಯಾವುದೇ ಸೈನ್-ಅಪ್ ಅಗತ್ಯವಿಲ್ಲ. Airbnb.org ಗೆಸ್ಟ್‌ಗಳು Airbnb ಯಲ್ಲಿ ಯಾವುದೇ ಮನೆಯನ್ನು ಬುಕ್ ಮಾಡಬಹುದು. Airbnb.org ಮೂಲಕ ವಾಸಿಸುತ್ತಿರುವ ಯಾರಾದರೂ ನಿಮ್ಮ ಸ್ಥಳವನ್ನು ಬುಕ್ ಮಾಡಿದರೆ ನಿಮಗೆ ಆ್ಯಪ್‌ನಲ್ಲಿ ತಿಳಿಸಲಾಗುತ್ತದೆ.Airbnb.org ವಾಸ್ತವ್ಯಗಳಿಗೆ ಪಾವತಿಸುತ್ತದೆ, ಇದು ಗೆಸ್ಟ್‌ಗಳಿಗೆ ತಮ್ಮ ಅಗತ್ಯಗಳಿಗೆ ಸೂಕ್ತವಾದ ಮನೆಯನ್ನು ಬುಕ್ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಇದರರ್ಥ ನಮ್ಮ ಗೆಸ್ಟ್‌ಗಳು ಶಾಲೆ, ಕೆಲಸ, ಚಿಕಿತ್ಸಾ ಕೇಂದ್ರ ಅಥವಾ ದುರಸ್ತಿ ಮಾಡಲಾಗುತ್ತಿರುವ ತಮ್ಮ ಹಾನಿಗೊಳಗಾದ ಮನೆಯ ಸಮೀಪದಲ್ಲಿ ತಂಗಬಹುದು.

Airbnb.org ವಾಸ್ತವ್ಯವನ್ನು ಹೋಸ್ಟ್ ಮಾಡಲು ಹೆಚ್ಚುವರಿ ಕೆಲಸದ ಅಗತ್ಯವಿದೆಯೇ?

ಹೆಚ್ಚುವರಿ ಏನೂ ಅಗತ್ಯವಿಲ್ಲ. ನೀವು ಈಗಾಗಲೇ ಹೊಂದಿರುವ ಸ್ಥಳವು ಲಾಂಡ್ರಿ, ಕೂಡಿ ಮಾಡಿದ ಊಟಕ್ಕಾಗಿ ಅಡುಗೆಮನೆ ಅಥವಾ ಮಕ್ಕಳು ಅಥವಾ ಸಾಕುಪ್ರಾಣಿಗಳು ಆಡಲು ಸ್ಥಳದಂತಹವುಗಳೊಂದಿಗೆ ಸಂಕಷ್ಟದ ಸಮಯದಲ್ಲಿ ಕುಟುಂಬಗಳು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು.

ಹೋಸ್ಟ್‌ಗಳು Airbnb.org ಗೆ ಹೇಗೆ ಸಹಾಯ ಮಾಡಬಹುದು?

ಹೋಸ್ಟ್‌ಗಳು Airbnb.org ಅನ್ನು ಕೆಲವು ರೀತಿಯಲ್ಲಿ ಬೆಂಬಲಿಸಬಹುದು. Airbnb.org ಗೆ ನೇರವಾಗಿ ದೇಣಿಗೆ ನೀಡಬಹುದು, ಏಕೆಂದರೆ 100% ದೇಣಿಗೆಗಳನ್ನು ಉಚಿತ, ತುರ್ತು ವಸತಿಗೆ ಧನಸಹಾಯ ನೀಡಲು ಬಳಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ Airbnb ಮೂಲಕ, ಹೋಸ್ಟ್‌ಗಳು ಪ್ರತಿ ಹೊರಪಾವತಿಯ ಶೇಕಡಾವಾರು ಮೊತ್ತವನ್ನು ದಾನ ಮಾಡಬಹುದು ಅಥವಾ Airbnb.org ಗೆಸ್ಟ್‌ಗಳಿಗೆ ಮಾತ್ರ ಲಿಸ್ಟಿಂಗ್‌ಗಳ ಮೇಲೆ ರಿಯಾಯಿತಿಯನ್ನು ಹೊಂದಿಸಬಹುದು.

ನಿಮ್ಮನ್ನು ಹೇಗೆ ಬೆಂಬಲಿಸಲಾಗುತ್ತದೆ

ನೀವು Airbnb.org ವಾಸ್ತವ್ಯವನ್ನು ಹೋಸ್ಟ್ ಮಾಡಿದಾಗ, Airbnb ಹೋಸ್ಟ್ ಆಗಿ ನೀವು ಪಡೆಯಬಹುದಾದ ಎಲ್ಲಾ ಬೆಂಬಲಕ್ಕೆ ನೀವು ಪ್ರವೇಶವನ್ನು ಹೊಂದಿರುತ್ತೀರಿ, ಜೊತೆಗೆ ಸ್ವಲ್ಪ ಹೆಚ್ಚುವರಿ ಬೆಂಬಲವನ್ನೂ ಪಡೆಯುತ್ತೀರಿ. ನೀವು ಹೋಸ್ಟ್‌‌ಗಳಿಗಾಗಿ AirCover ನಿಂದ ರಕ್ಷಣೆ ಪಡೆದಿದ್ದೀರಿ ಮತ್ತು ನೀವು Airbnb.org ನ ವಿಶೇಷವಾಗಿ ತರಬೇತಿ ಪಡೆದ ಗ್ರಾಹಕ ಬೆಂಬಲ ತಂಡಕ್ಕೆ ಪ್ರವೇಶವನ್ನು ಹೊಂದಿರುತ್ತೀರಿ.ಸ್ಥಳೀಯ ಪಾಲುದಾರ ಸಂಸ್ಥೆಗಳು ಅಗತ್ಯವಿರುವವರನ್ನು ಗುರುತಿಸುತ್ತವೆ, ನಂತರ Airbnb ಆ್ಯಪ್ ಮೂಲಕ ಅಲ್ಪಾವಧಿಯ ವಾಸ್ತವ್ಯವನ್ನು ಬುಕ್ ಮಾಡಲು ಅವರಿಗೆ ಸಹಾಯ ಮಾಡುತ್ತವೆ ಮತ್ತು ಸಾಮಾನ್ಯ ವಾಸ್ತವ್ಯದಂತೆಯೇ ಅವರ ಗುರುತನ್ನು ಪರಿಶೀಲಿಸುತ್ತವೆ.

Airbnb.org ಹೋಸ್ಟ್‌ಗಳಿಂದ ಕೇಳಿ