ವಾಷಿಂಗ್ಟನ್ ಪ್ರವಾಹ

ಪ್ರವಾಹದ ನಂತರ ಟೌನೆಸ್ಸಾ ಸಾಕುಪ್ರಾಣಿ ಸ್ನೇಹಿ ವಸತಿಯನ್ನು ಕಂಡುಕೊಳ್ಳುತ್ತಾರೆ

ಟೌನೆಸ್ಸಾ ತಮ್ಮ ಸೇವಾ ನಾಯಿ ಫ್ರಿಡಾದೊಂದಿಗೆ ಗಾಲಿಕುರ್ಚಿಯಲ್ಲಿದ್ದಾರೆ.

ಡಿಸೆಂಬರ್ 2025 ರ ಪ್ರವಾಹವು ವಾಷಿಂಗ್ಟನ್‌ನಲ್ಲಿರುವ ಟೌನೆಸ್ಸಾ ಮತ್ತು ಅವರ ಸಂಗಾತಿ ಬ್ರಿಯಾನ್ ಅವರ ಮನೆಗೆ ಅಪ್ಪಳಿಸುವ ಮೊದಲೇ, ಅವರು ದುರಂತದಿಂದ ಪಾರಾದರು.2024 ರಲ್ಲಿ, ಕಾರು ಅಪಘಾತವು ಟೌನೆಸ್ಸಾ ಅವರಿಗೆ ಅಂಗವೈಕಲ್ಯತೆ ಉಂಟುಮಾಡಿತು ಮತ್ತು ಆಕೆ ಅನೇಕ ವೈದ್ಯಕೀಯ ಸ್ಥಿತಿಗಳಿಂದ ಬಳಲುವಂತಾಯಿತು. ಆಕೆಯ ಎರಡು ನಾಯಿಗಳಾದ ಫ್ರಿಡಾ ಮತ್ತು ಕೈಸರ್ ಆಕೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗುಣಮುಖರಾಗಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು.ಆದ್ದರಿಂದಲೇ, ಡಿಸೆಂಬರ್ 10, 2025 ರಂದು ತೀವ್ರ ಹವಾಮಾನ ಮತ್ತು ಪ್ರವಾಹದ ಎಚ್ಚರಿಕೆಯನ್ನು ಒಳಗೊಂಡ ಕಡ್ಡಾಯ ಸ್ಥಳಾಂತರ ಆದೇಶವನ್ನು ಟೌನೆಸ್ಸಾ ಸ್ವೀಕರಿಸಿದಾಗ, ಆಕೆ ತಮ್ಮ ನಾಯಿಗಳಿಗಾಗಿ ಸಹಾಯ ಕೇಳಲು ಕೈ ಚಾಚಿದರು. ಬ್ರಿಯಾನ್ ಕೆಲಸಕ್ಕಾಗಿ ಊರಿನಿಂದ ಹೊರಗಿದ್ದರಿಂದ, ಟೌನೆಸ್ಸಾ ಅವರ ಅಗತ್ಯ ವಸ್ತುಗಳನ್ನು ತ್ವರಿತವಾಗಿ ತಾವೇ ಪ್ಯಾಕ್ ಮಾಡಬೇಕಾಯಿತು.ನಂತರ ಎದುರಾದ ಪ್ರಶ್ನೆ, ಎರಡು ದೊಡ್ಡ ನಾಯಿಗಳೊಂದಿಗೆ ಎಲ್ಲಿ ಸ್ಥಳಾಂತರಗೊಳ್ಳುವುದೆಂದು.

"ನಾವು ಏನು ಮಾಡುವುದು ಎಂದು ತೋಚದೆ ಕಾರಿನಲ್ಲಿ ಕುಳಿತು ಅತ್ತಿದ್ದು ನನಗೆ ನೆನಪಿದೆ."

- ಟೌನೆಸ್ಸಾ, Airbnb.org ಗೆಸ್ಟ್
ಮನೆಯೊಳಗೆ ಪ್ರವಾಹ ಪ್ರವೇಶಿಸಿದ ನಂತರ ನೀರಿನ ಹಾನಿ ಮತ್ತು ನೆಲದ ಮೇಲೆ ಮಲಗುವ ಚೀಲವನ್ನು ಹೊಂದಿರುವ ಮನೆ.
ಪ್ರವಾಹದ ನಂತರ ಟೌನೆಸ್ಸಾ ಮತ್ತು ಬ್ರಿಯಾನ್ ಅವರ ಮನೆ.

ಹೊರಟು ಎರಡು ಗಂಟೆಗಳಲ್ಲಿ, ಟೌನೆಸ್ಸಾ ಮತ್ತು ಬ್ರಿಯಾನ್ ಅವರ ಮನೆಯಲ್ಲಿ ನೀರು ತುಂಬಲು ಪ್ರಾರಂಭಿಸಿತು. ಫ್ರಿಡಾ ಮತ್ತು ಕೈಸರ್ ಸೇರಿದಂತೆ ಅವರ ಇಡೀ ಕುಟುಂಬಕ್ಕೆ ಅವಕಾಶ ಕಲ್ಪಿಸುವ ತುರ್ತು ವಸತಿಗಾಗಿ ಟೌನೆಸ್ಸಾ ಹುಡುಕಿದರು.ಟೌನೆಸ್ಸಾ ಅವರು ಪಂಜರಗಳಲ್ಲಿ ಮಾತ್ರ ಸಾಕುಪ್ರಾಣಿಗಳನ್ನು ಅನುಮತಿಸುವ ಆಶ್ರಯವನ್ನು ಕಂಡುಕೊಂಡರು, ಆದರೆ ದೈನಂದಿನ ಕಾರ್ಯಗಳಲ್ಲಿ ಅವರಿಗೆ ಸಹಾಯ ಮಾಡಲು ನಾಯಿಗಳು ಮುಕ್ತವಾಗಿ ಸಂಚರಿಸಲು ಸ್ಥಳ ಬೇಕಾಗಿತ್ತು.

ಕಾರಿನ ಹಿಂಭಾಗದ ಕಿಟಕಿಯಿಂದ ಹೊರಗೆ ನೋಡುತ್ತಾ ಎರಡು ನಾಯಿಗಳು ಹಿಂಭಾಗದ ಸೀಟಿನಲ್ಲಿ ಕುಳಿತಿವೆ.

ಕೈಸರ್ ಮತ್ತು ಫ್ರಿಡಾ, ಟೌನೆಸ್ಸಾ ಮತ್ತು ಬ್ರಿಯಾನ್‌ರ ಎರಡು ನಾಯಿಗಳು.

"ನಾಯಿಗಳಿಂದ ದೂರಾಗುವ ಪ್ರಶ್ನೆಯೇ ಇರಲಿಲ್ಲ. ಇದಕ್ಕಾಗಿ ನಾವು ಕಾರಿನಲ್ಲಿ ಮಲಗಬೇಕಾದ ಪರಿಸ್ಥಿತಿ ಬಂದರೆ, ಅದನ್ನೂ ಮಾಡಲು ಸೈ."

- ಟೌನೆಸ್ಸಾ

ಆಗಲೇ ಟೌನೆಸ್ಸಾ Airbnb.org ಅನ್ನು ಕಂಡುಕೊಂಡಿದ್ದು. ಟೌನೆಸ್ಸಾ ಮತ್ತು ಬ್ರಿಯಾನ್ ಅವರು ಮನೆಯ ವಾಸ್ತವ್ಯವನ್ನು ಬುಕ್ ಮಾಡಿದರು, ಅದರಲ್ಲಿ ಫ್ರಿಡಾ ಮತ್ತು ಕೈಸರ್‌ಗೆ ಸಾಕಷ್ಟು ಸ್ಥಳಾವಕಾಶವಿದ್ದುದರಿಂದ ಅದು ಅವರಿಗೆ ಸಮಾಧಾನಕರವಾಗಿತ್ತು.

ನಾಯಿ ಮತ್ತು ಅದರ ಮಾಲೀಕರು ಸೋಫಾದ ಮೇಲೆ ಕುಳಿತಿದ್ದಾರೆ ಮತ್ತು ಮಾಲೀಕರು ನಾಯಿಗೆ ಮುತ್ತಿಡುತ್ತಿದ್ದಾರೆ.

"ಆ ರಾತ್ರಿ ಆರಾಮದಾಯಕ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಸ್ನಾನ ಮಾಡಲು ಸಾಧ್ಯವಾಗಿದ್ದು ತುಂಬಾ ಅದ್ಭುತವಾಗಿತ್ತು. ನಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುವುದು ಮತ್ತು ಯಾವುದೋ ಫಾಸ್ಟ್ ಫುಡ್ ತಿನ್ನುವುದನ್ನು ತಪ್ಪಿಸುವುದು... ಇಂತಹ ಸಮಯದಲ್ಲಿ ಅದ್ಭುತ ಅನುಭವವಾಗಿತ್ತು."

- ಟೌನೆಸ್ಸಾ
ತಮ್ಮ ಇಬ್ಬರು ನಾಯಿಗಳಾದ ಫ್ರಿಡಾ ಮತ್ತು ಕೈಸರ್‌ನೊಂದಿಗೆ ಮಹಿಳೆ ಟೌನೆಸ್ಸಾ ಮತ್ತು ಅವರ ಸಂಗಾತಿ ಬ್ರಿಯಾನ್ ಅವರ ಕುಟುಂಬದ ಫೋಟೋ.

ಟೌನೆಸ್ಸಾ ಮತ್ತು ಬ್ರಿಯಾನ್ ಅವರ ಮನೆ ವಾಸಯೋಗ್ಯವಲ್ಲದಿದ್ದರೂ, ಅವರು ತಮ್ಮ ಮನೆಯಿಂದ ಕೇವಲ 20 ನಿಮಿಷ ದೂರದಲ್ಲಿರುವ ತಮ್ಮ Airbnb.org ವಾಸ್ತವ್ಯದಲ್ಲಿ ವಿಶ್ರಾಂತಿ ಪಡೆಯಲು ಸಾಧ್ಯವಾಯಿತು. ಇದರರ್ಥ ಟೌನೆಸ್ಸಾ, ಬ್ರಿಯಾನ್ ಮತ್ತು ಅವರ ನಾಯಿಗಳು ಎಂದಿಗೂ ಮನೆಯಿಂದ ತುಂಬಾ ದೂರದಲ್ಲಿರಲಿಲ್ಲ.Airbnb.org ಈ ಪ್ರವಾಹಗಳಿಗೆ ಪ್ರತಿಕ್ರಿಯೆಯಾಗಿ 2,300 ಬಾಧಿತರಿಗೆ ಮತ್ತು 220 ಸಾಕುಪ್ರಾಣಿಗಳಿಗೆ ಉಚಿತ, ತುರ್ತು ವಸತಿ ಒದಗಿಸಿತು. ಟೌನೆಸ್ಸಾ ಮತ್ತು ಬ್ರಿಯಾನ್‌ಗೆ ಮುಖ್ಯವಾಗಿ, ಈ ವಾಸ್ತವ್ಯ ಫ್ರಿಡಾ ಮತ್ತು ಕೈಸರ್ ಅನ್ನು ಒಳಗೊಂಡಿತ್ತು.ಟೌನೆಸ್ಸಾ, ಬ್ರಿಯಾನ್, ಫ್ರಿಡಾ ಮತ್ತು ಕೈಸರ್‌ನಂತಹ ಕುಟುಂಬಗಳಿಗೆ ಸಹಾಯ ಮಾಡಲು ದಾನ ಮಾಡಿ.

ತೊಡಗಿಸಿಕೊಳ್ಳಿ

ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುತ್ತಿರುವ ಜಾಗತಿಕ ಜನ ಸಮುದಾಯಕ್ಕೆ ಸೇರಿಕೊಳ್ಳಿ.

ಇನ್ನಷ್ಟು ತಿಳಿಯಿರಿ

ಪ್ರತಿ ವಾಸ್ತವ್ಯಕ್ಕೂ ಒಂದು ಕಥೆಯಿದೆ

ವಿಪತ್ತುಗಳಿಂದ ಬಾಧಿತರಾದವರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.