ಚಂಡಮಾರುತ ಇಸಾಯಾಸ್ ಪರಿಹಾರ
ಇಸಾಯಾಸ್ ಚಂಡಮಾರುತ ಮತ್ತು ಇತರ ಬಿಕ್ಕಟ್ಟುಗಳಿಂದ ಬಾಧಿತರಾದವರಿಗೆ ಉಚಿತ, ತುರ್ತು ವಸತಿ ಒದಗಿಸಲು ಸಹಾಯ ಮಾಡಿ.
ದೇಣಿಗೆ ನೀಡಿಚಂಡಮಾರುತ ಇಸಾಯಾಸ್ ಪರಿಹಾರ
ಇಸಾಯಾಸ್ ಚಂಡಮಾರುತ ಮತ್ತು ಇತರ ಬಿಕ್ಕಟ್ಟುಗಳಿಂದ ಬಾಧಿತರಾದವರಿಗೆ ಉಚಿತ, ತುರ್ತು ವಸತಿ ಒದಗಿಸಲು ಸಹಾಯ ಮಾಡಿ.
ದೇಣಿಗೆ ನೀಡಿ
ನಾವು ಹೇಗೆ ಸ್ಪಂದಿಸುತ್ತಿದ್ದೇವೆ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸಲು Airbnb ಸ್ಥಾಪಿಸಿದ ಲಾಭೋದ್ದೇಶವಿಲ್ಲದ Airbnb.org, ಸ್ಥಳಾಂತರಗೊಂಡ ನಿವಾಸಿಗಳು ಮತ್ತು ಪ್ರಥಮ ಪ್ರತಿಸ್ಪಂದಕರಿಗೆ ಉಚಿತ, ತುರ್ತು ವಸತಿ ಒದಗಿಸಲು ಸ್ಥಳೀಯ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.Airbnb.org ವಾಸಯೋಗ್ಯವಲ್ಲದ ಮನೆಗಳನ್ನು ಹೊಂದಿರುವ ಅಥವಾ ಕಡ್ಡಾಯ ಸ್ಥಳಾಂತರ ಆದೇಶಗಳ ಅಡಿಯಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಉಚಿತ ತುರ್ತು ವಸತಿ ಒದಗಿಸಲು Inform Florida ಮತ್ತು ಫ್ಲೋರಿಡಾದ 211 ನೆಟ್‌ವರ್ಕ್, ಜೊತೆಗೆ United Way of Southeast Louisiana ಮತ್ತು ಗಲ್ಫ್ ಕೋಸ್ಟ್ ಪ್ರದೇಶದಾದ್ಯಂತದ ಹೆಚ್ಚುವರಿ ಸಮುದಾಯ ಪಾರ್ಟ್ನರ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.ಫ್ಲೋರಿಡಾದಲ್ಲಿ, ಕಡ್ಡಾಯ ಸ್ಥಳಾಂತರ ಆದೇಶಗಳ ಅಡಿಯಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು 211 ಅನ್ನು ಸಂಪರ್ಕಿಸುವ ಮೂಲಕ ಬೆಂಬಲವನ್ನು ವಿನಂತಿಸಬಹುದು, ಅದು ಅರ್ಹತೆಯನ್ನು ನಿರ್ಧರಿಸುತ್ತದೆ.ಲೂಯಿಸಿಯಾನದಲ್ಲಿ, ನಿವಾಸಿಗಳು 211 ಅನ್ನು ಸಂಪರ್ಕಿಸುವ ಮೂಲಕ ಬೆಂಬಲವನ್ನು ವಿನಂತಿಸಬಹುದು, ಅದು ಅರ್ಹತೆಯನ್ನು ನಿರ್ಧರಿಸುತ್ತದೆ.Airbnb.org ಗೆ ಬಂದ ದೇಣಿಗೆಗಳು ವಸತಿ ವೆಚ್ಚವನ್ನು ಭರಿಸುವುದರಿಂದ, ಅಗತ್ಯವಿರುವ ಜನರು ಉಚಿತವಾಗಿ ತಂಗಬಹುದು.
ಸಹಾಯ ಮಾಡುವುದು ಹೇಗೆ

ದೇಣಿಗೆ ನೀಡಿ
ನಿಮ್ಮ ದೇಣಿಗೆಯ 100% ಮೊತ್ತವನ್ನು ಇಸಾಯಾಸ್ ಚಂಡಮಾರುತ ಮತ್ತು ಇತರ ವಿಪತ್ತುಗಳಿಂದ ಬಾಧಿತರಾದ ಜನರಿಗೆ ತುರ್ತು ವಸತಿಯನ್ನು ಒದಗಿಸಲು ಬಳಸಲಾಗುತ್ತದೆ.
FAQ
Airbnb.org ತುರ್ತು ವಾಸ್ತವ್ಯಕ್ಕೆ ನಾನು ಹೇಗೆ ಪ್ರವೇಶಾವಕಾಶ ಪಡೆಯಬಹುದು?
ಪ್ರಸ್ತುತ, ತುರ್ತು ನೆರವು ಕೋರುತ್ತಿರುವ ಜನರಿಗಾಗಿ Airbnb.org ನೇರ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಬದಲಿಗೆ, ತುರ್ತು ವಾಸ್ತವ್ಯಗಳ ಅಗತ್ಯವಿರುವ ಜನರನ್ನು ಹುಡುಕಲು Airbnb.org ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಲಾಭೋದ್ದೇಶರಹಿತ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಇನ್ನಷ್ಟು ತಿಳಿಯಿರಿ
Airbnb.org ಮೂಲಕ ವಾಸ್ತವ್ಯವನ್ನು ಬುಕ್ ಮಾಡಲು ಯಾರು ಅರ್ಹರು?
ನಾನು ನನ್ನ ಮನೆಯನ್ನು ಗೆಸ್ಟ್ಗಳಿಗಾಗಿ Airbnb ಯಲ್ಲಿ ಪೂರ್ಣ ದರದಲ್ಲಿ ಮತ್ತು ಅದರ ಜೊತೆಗೆ Airbnb.org ಮೂಲಕ ತುರ್ತುಪರಿಸ್ಥಿತಿಗಳ ಸಂದರ್ಭದಲ್ಲಿ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿಯೂ ಒದಗಿಸಬಹುದೇ?
ಹೌದು. ನೀವು ಒಂದು ಕ್ಯಾಲೆಂಡರ್ ಹೊಂದಿರುವುದರಿಂದ ಗೆಸ್ಟ್ಗಳು ನಿಮ್ಮ ಸ್ಥಳವನ್ನು ಎರಡು ಬಾರಿ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
Airbnb.org ನಿಂದ ಬುಕಿಂಗ್ ಬಂದಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
Airbnb.org ಮೂಲಕ ತುರ್ತು ವಾಸ್ತವ್ಯಕ್ಕಾಗಿ ರಿಸರ್ವೇಶನ್ ವಿನಂತಿಯನ್ನು ಮಾಡಿದಾಗ ಬುಕಿಂಗ್ ಪ್ರಕ್ರಿಯೆಯ ಸಂದರ್ಭದಲ್ಲಿ ಹೋಸ್ಟ್ಗಳಿಗೆ ಸೂಚಿಸಲಾಗುತ್ತದೆ.
ಗೆಸ್ಟ್ ಒಬ್ಬರ ವಾಸ್ತವ್ಯವು ಕೊನೆಗೊಂಡಾಗ ಏನಾಗುತ್ತದೆ?
ರಿಸರ್ವೇಶನ್ ದಾಖಲೆಯಲ್ಲಿದ್ದಂತೆ ಒಪ್ಪಿದ ಸಮಯದಲ್ಲಿ ಚೆಕ್ಔಟ್ ಮಾಡುವುದು Airbnb.org ಗೆಸ್ಟ್ಗಳ ಜವಾಬ್ದಾರಿಯಾಗಿದೆ. ಚೆಕ್ಔಟ್ ತಪ್ಪಿದಲ್ಲಿ, ಈ ನಿಟ್ಟಿನಲ್ಲಿ ನೆರವಾಗಲು ಗೆಸ್ಟ್ಗಳ ಜೊತೆ ಕೆಲಸ ಮಾಡುವ ಪರಿಣಿತ ಬೆಂಬಲ ಏಜೆಂಟ್ಗಳ ಮೀಸಲಾದ ತಂಡವನ್ನು Airbnb ಹೊಂದಿದೆ.
ನನ್ನ ದೇಣಿಗೆ ಯಾರಿಗೆ ಸಹಾಯ ಮಾಡುತ್ತದೆ?
ನಿಮ್ಮ ದೇಣಿಗೆಯ 100% ಉಚಿತ ತುರ್ತು ವಸತಿಗೆ ಧನಸಹಾಯ ನೀಡುತ್ತದೆ.
ನಮ್ಮ ಸ್ಪಂದನೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.




