ನಮ್ಮ ಪಾರ್ಟ್ನರ್‌ಗಳು
Airbnb.org ಅಲ್ಪಾವಧಿಯ ವಸತಿಗೆ ಧನಸಹಾಯ ನೀಡುತ್ತದೆ ಮತ್ತು ಅಗತ್ಯವಿರುವ ಜನರಿಗೆ ತುರ್ತು ವಾಸ್ತವ್ಯಗಳನ್ನು ವಿತರಿಸಲು ಸ್ಥಳೀಯ ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ.

Airbnb.org ನಿಮ್ಮ ಸಂಸ್ಥೆಯೊಂದಿಗೆ ಹೇಗೆ ಕೆಲಸ ಮಾಡಬಹುದು
Airbnb.org ಅಗತ್ಯವಿರುವವರಿಗೆ, ಸ್ವಯಂಸೇವಕರಿಗೆ ಮತ್ತು ಪ್ರಥಮ ಪ್ರತಿಸ್ಪಂದಕರಿಗೆ ತ್ವರಿತ ಮತ್ತು ಹೊಂದಿಕೊಳ್ಳುವ ಅಲ್ಪಾವಧಿಯ ವಾಸಸ್ಥಾನವನ್ನು ಉಚಿತವಾಗಿ ಒದಗಿಸುತ್ತದೆ.
ಪಾರ್ಟ್ನರ್ ಆಗಿ
ಸರಳ
ತಂತ್ರಜ್ಞಾನ ಮತ್ತು ಸಮುದಾಯವನ್ನು ಸಕ್ರಿಯಗೊಳಿಸುವ ಮೂಲಕ, Airbnb.org ದೊಡ್ಡ ಪ್ರಮಾಣದಲ್ಲಿ ಉಚಿತ ತುರ್ತು ವಸತಿ ಒದಗಿಸುತ್ತದೆ.

ವೇಗ
Airbnb.org ಈಗಾಗಲೇ ಅಸ್ತಿತ್ವದಲ್ಲಿರುವ ನೆಟ್‌ವರ್ಕ್ ಮತ್ತು ಆ್ಯಪ್ ಅನ್ನು ಬಳಸುವುದರಿಂದ, ನಮ್ಮ ತಂಡಗಳು ದಿನಗಳಲ್ಲಿ ಅಲ್ಲ, ಗಂಟೆಗಳೊಳಗೆ ವಸತಿ ಒದಗಿಸಬಹುದು.

ಹೊಂದಿಕೊಳ್ಳುವಿಕೆ
ಪ್ರಪಂಚದಾದ್ಯಂತ Airbnb ಯಲ್ಲಿ ಲಭ್ಯವಿರುವ 9 ದಶಲಕ್ಷ ಲಿಸ್ಟಿಂಗ್‌ಗಳಿಗೆ ಪ್ರವೇಶದೊಂದಿಗೆ ಕುಟುಂಬಗಳು, ಸಾಕುಪ್ರಾಣಿಗಳು ಮತ್ತು ಪ್ರವೇಶಾವಕಾಶದ ಅಗತ್ಯಗಳನ್ನು ಹೊಂದಿರುವ ಜನರಿಗೆ ಆಯ್ಕೆಗಳು.
ನಮ್ಮ ಪಾರ್ಟ್ನರ್‌ಗಳನ್ನು ಭೇಟಿ ಮಾಡಿ
ಅಗತ್ಯವಿರುವವರನ್ನು ಗುರುತಿಸುವ ಮೂಲಕ, 2020 ರಿಂದ 16 ಲಕ್ಷಕ್ಕೂ ಹೆಚ್ಚು ರಾತ್ರಿಗಳ ಉಚಿತ, ತುರ್ತು ವಸತಿಯನ್ನು ಒದಗಿಸಲು ಪಾರ್ಟ್ನರ್‌ಗಳು ನಮ್ಮ ತಂಡಕ್ಕೆ ಸಹಾಯ ಮಾಡಿದರು.
ತುರ್ತು ಪ್ರತಿಕ್ರಿಯೆ ವಾಸ್ತವ್ಯಗಳು
1 ಪುಟಗಳಲ್ಲಿ 1 ನೇ ಪುಟ
ವೈದ್ಯಕೀಯ ಚಿಕಿತ್ಸೆಗಾಗಿ ವಾಸ್ತವ್ಯ
1 ಪುಟಗಳಲ್ಲಿ 1 ನೇ ಪುಟ
ಪುನರ್ವಸತಿಯ ವಾಸ್ತವ್ಯಗಳು
1 ಪುಟಗಳಲ್ಲಿ 1 ನೇ ಪುಟ
ನಮ್ಮ ಪಾರ್ಟ್ನರ್‌ಗಳ ಮಾತುಗಳನ್ನು ಕೇಳಿ
ಪಾರ್ಟ್ನರ್ ಕಥೆಗಳು
ಪ್ರಪಂಚದಾದ್ಯಂತ ಇರುವ ನಮ್ಮ ಪಾರ್ಟ್ನರ್‌ಗಳ ಬಗ್ಗೆ ತಿಳಿಯಿರಿ ಮತ್ತು ನಾವು ಒಟ್ಟಾಗಿ ನೆರವಾದ ಫಲಾನುಭವಿಗಳ ಬಗ್ಗೆ ಓದಿ.
ಪಾರ್ಟ್ನರ್ ಕಥೆಗಳು
ಪ್ರಪಂಚದಾದ್ಯಂತ ಇರುವ ನಮ್ಮ ಪಾರ್ಟ್ನರ್‌ಗಳ ಬಗ್ಗೆ ತಿಳಿಯಿರಿ ಮತ್ತು ನಾವು ಒಟ್ಟಾಗಿ ನೆರವಾದ ಫಲಾನುಭವಿಗಳ ಬಗ್ಗೆ ಓದಿ.

ಸೆಂಟ್ರಲ್ ಟೆಕ್ಸಾಸ್ ಪ್ರವಾಹ
ಪ್ರವಾಹದಿಂದ ಹಾನಿಗೊಳಗಾದವರಿಗೆ Airbnb.org ಆಲ್ ಹ್ಯಾಂಡ್ಸ್ ಅಂಡ್ ಹಾರ್ಟ್ಸ್ ಮೂಲಕ ಉಚಿತ, ತುರ್ತು ವಸತಿ ಒದಗಿಸುತ್ತಿದೆ ಎಂದು ಸ್ಕೈಲಿನ್ ತಿಳಿದುಕೊಂಡರು. ಅವರು ಕೂಡಲೇ ಸಂಪರ್ಕಿಸಿ ಹತ್ತಿರದಲ್ಲಿಯೇ ತಂಗಲು Airbnb.org ಅನ್ನು ಬುಕ್ ಮಾಡಲು ಸಾಧ್ಯವಾಯಿತು. ಈ ಸ್ಥಳವು ಆಕೆಯ ಮಗನಿಗೆ ಆಡಲು ಸ್ಥಳಾವಕಾಶವನ್ನು ನೀಡಿತು ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಯೋಚಿಸಲು ಅವಕಾಶ ಮಾಡಿಕೊಟ್ಟಿತು.


ವೈದ್ಯಕೀಯ ಆರೈಕೆಗಾಗಿ ಪ್ರಯಾಣಿಸುವುದು
ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುತ್ತಿದ್ದ 7 ವರ್ಷದ ಯೈರಾಳ ಜೀವ ಉಳಿಸಲು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿತ್ತು. ಅವಳ ಪೋಷಕರು, ಮಕ್ಕಳಿಗೆ ಜೀವ ಉಳಿಸುವ ಹೃದಯ ಶಸ್ತ್ರಚಿಕಿತ್ಸೆಗಾಗಿ ಮೆಕ್ಸಿಕೊ ನಗರಕ್ಕೆ ಪ್ರಯಾಣಿಸುವ ಕುಟುಂಬಗಳಿಗೆ ನೆರವಾಗುವ ಮೆಕ್ಸಿಕೊ ಮೂಲದ ಲಾಭರಹಿತ ಸಂಸ್ಥೆಯಾದ Airbnb.org ನ ಪಾರ್ಟ್ನರ್ Fundación Lilo ಅನ್ನು ಸಂಪರ್ಕಿಸಿದರು.

ಪಾರ್ಟ್ನರ್ FAQ ಗಳು
Airbnb.org ಯಾವ ಪ್ರದೇಶಗಳಲ್ಲಿ ವಸತಿ ಒದಗಿಸುತ್ತದೆ?
Airbnb.org ತನ್ನ ಉದ್ದೇಶವನ್ನು ಮೂರು ಪ್ರಾಥಮಿಕ ಕಾರ್ಯಕ್ರಮಗಳ ಮೂಲಕ ನೆರವೇರಿಸುತ್ತದೆ, ಪ್ರತಿಯೊಂದೂ ವಿಶಿಷ್ಟವಾದ ವಸತಿ ಅಗತ್ಯವನ್ನು ಪರಿಹರಿಸುತ್ತದೆ.
- ತುರ್ತು ಪ್ರತಿಕ್ರಿಯೆ ವಾಸ್ತವ್ಯಗಳು: ವಿಪತ್ತುಗಳು ಅಥವಾ ತುರ್ತು ಪರಿಸ್ಥಿತಿಗಳಿಂದ ಸ್ಥಳಾಂತರಗೊಂಡವರನ್ನು ಹಾಗೂ ಸಂಕಷ್ಟ ನಿರ್ವಹಣೆಯ ಪ್ರಮುಖ ಕಾರ್ಯಗಳಲ್ಲಿ ತೊಡಗಿರುವವರಿಗೆ ವಸತಿ ಸೌಲಭ್ಯ ಒದಗಿಸುವುದು
- ವೈದ್ಯಕೀಯ ವಾಸ್ತವ್ಯಗಳು: ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣಿಸಬೇಕಾದ ವ್ಯಕ್ತಿಗಳು ಮತ್ತು ಕುಟುಂಬಗಳು, ಗಂಭೀರ ಅನಾರೋಗ್ಯದಿಂದ ಸಂಕಷ್ಟ ಅನುಭವಿಸುತ್ತಿರುವವರು ಅಥವಾ ವೈದ್ಯಕೀಯ ವೃತ್ತಿಪರರಾಗಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವವರಿಗೆ ವಸತಿ ಸೌಲಭ್ಯ ಒದಗಿಸುವುದು.
- ಪುನರ್ವಸತಿ ವಾಸ್ತವ್ಯಗಳು: ತಮ್ಮ ಮನೆಗಳನ್ನು ಬಲವಂತವಾಗಿ ತೊರೆಯಬೇಕಾದ, ಹೊಸ ಸಮುದಾಯಗಳಲ್ಲಿ ಪುನರ್ವಸತಿ ಪಡೆಯುತ್ತಿರುವ ಮತ್ತು ನಿರಾಶ್ರಿತರು ಎಂದು ವರ್ಗೀಕರಿಸಲ್ಪಟ್ಟಿರುವ ಅಥವಾ ಅಂತಹುದೇ ರಕ್ಷಣಾತ್ಮಕ ಸ್ಥಾನಮಾನವನ್ನು ಪಡೆದಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವುದು
Airbnb.org ಪಾರ್ಟ್ನರ್ ಆಗಲು ಒಂದು ಸಂಸ್ಥೆಯು ಏನು ಮಾಡಬೇಕು?
ಪಾರ್ಟ್ನರ್ ಆಗಲು, Airbnb.org ತಂಡದಿಂದ ನಿಮಗೆ ಒಬ್ಬರನ್ನು ನಿಯೋಜಿಸಲಾಗುತ್ತದೆ ಮತ್ತು ನೀವು ಈ ಹಂತಗಳನ್ನು ಒಟ್ಟಿಗೆ ಅನುಸರಿಸುತ್ತೀರಿ.
- ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ತಾತ್ಕಾಲಿಕ ವಸತಿ ಒದಗಿಸುವ Airbnb.org ನ ಗುರಿಗಳೊಂದಿಗೆ ನಿಮ್ಮ ಧ್ಯೇಯ, ಕಾರ್ಯಕ್ರಮಗಳು ಮತ್ತು ಭೌಗೋಳಿಕ ಗಮನವು ಹೊಂದಿಕೆಯಾಗುತ್ತದೆ ಎಂದು ದೃಢಪಡಿಸಲು ನಿಮ್ಮ Airbnb.org ಸಂಪರ್ಕ ವ್ಯಕ್ತಿಯೊಂದಿಗೆ ಕೆಲಸ ಮಾಡಿ
- Airbnb.org ತುರ್ತು ಪ್ರತಿಕ್ರಿಯೆ, ವೈದ್ಯಕೀಯ ವಾಸ್ತವ್ಯಗಳು ಅಥವಾ ಪುನರ್ವಸತಿ ಕಾರ್ಯಕ್ರಮಗಳ ಕುರಿತ ತರಬೇತಿಯಲ್ಲಿ ಭಾಗವಹಿಸಿ
- ವಿಪತ್ತುಗಳು ಅಥವಾ ಬಿಕ್ಕಟ್ಟುಗಳಿಂದ ಬಾಧಿತರಾದ ವ್ಯಕ್ತಿಗಳನ್ನು ತುರ್ತು ವಸತಿಗಾಗಿ ರೆಫರ್ ಮಾಡಲು ಸಿದ್ಧರಾಗಿರಿ
ತುರ್ತು ವಾಸ್ತವ್ಯಗಳಿಂದ Airbnb ಲಾಭ ಗಳಿಸುತ್ತದೆಯೇ?
ಈ ವಾಸ್ತವ್ಯಗಳಿಂದ Airbnb ಲಾಭ ಗಳಿಸುವುದಿಲ್ಲ.
















