ವೆನೆಜುವೆಲಾ ಭೂಕಂಪ ಪರಿಹಾರ
ವೆನೆಜುವೆಲಾ ಭೂಕಂಪ ಮತ್ತು ಇತರ ಬಿಕ್ಕಟ್ಟುಗಳಿಂದ ಬಾಧಿತರಾದವರಿಗೆ ಉಚಿತ, ತುರ್ತು ವಸತಿ ಒದಗಿಸಲು ಸಹಾಯ ಮಾಡಿ.
ದೇಣಿಗೆ ನೀಡಿವೆನೆಜುವೆಲಾ ಭೂಕಂಪ ಪರಿಹಾರ
ವೆನೆಜುವೆಲಾ ಭೂಕಂಪ ಮತ್ತು ಇತರ ಬಿಕ್ಕಟ್ಟುಗಳಿಂದ ಬಾಧಿತರಾದವರಿಗೆ ಉಚಿತ, ತುರ್ತು ವಸತಿ ಒದಗಿಸಲು ಸಹಾಯ ಮಾಡಿ.
ದೇಣಿಗೆ ನೀಡಿ
ನಾವು ಹೇಗೆ ಸ್ಪಂದಿಸುತ್ತಿದ್ದೇವೆ
ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸಲು Airbnb ಸ್ಥಾಪಿಸಿದ ಲಾಭೋದ್ದೇಶವಿಲ್ಲದ Airbnb.org ಪ್ರಸ್ತುತ ವೆನೆಜುವೆಲಾದಲ್ಲಿ ಪರಿಹಾರ ಕಾರ್ಯಗಳನ್ನು ಬೆಂಬಲಿಸಲು US ಮತ್ತು ನೆರೆಯ ದೇಶಗಳಲ್ಲಿ ನೆಲೆಸಿರುವ ಪ್ರಥಮ ಪ್ರತಿಸ್ಪಂದಕರಿಗೆ ಉಚಿತ, ತುರ್ತು ವಸತಿ ಒದಗಿಸುತ್ತಿದೆ. ಈ ಸಂಸ್ಥೆಗಳಿಗೆ ವಾಸ್ತವ್ಯ ಉಚಿತವಾಗಿದ್ದು, ಇದರ ವೆಚ್ಚವನ್ನು Airbnb.org ಮತ್ತು ದಾನಿಗಳ ಉದಾರ ಸಹಾಯದಿಂದ ಭರಿಸಲಾಗುತ್ತದೆ.ಈ ಆರಂಭಿಕ ಹಂತದಲ್ಲಿ, ರೆಸ್ಕ್ಯೂ ರೆಸ್ಪಾನ್ಸ್ ಇಂಟರ್ನ್ಯಾಷನಲ್, CADENA ಇಂಟರ್ನ್ಯಾಷನಲ್ ಮತ್ತು ಇತರ ಲಾಭೋದ್ದೇಶವಿಲ್ಲದ ಸಂಸ್ಥೆಗಳು ವೆನೆಜುವೆಲಾದಲ್ಲಿ ನಿಯೋಜನೆಗೆ ಸಿದ್ಧವಾಗುತ್ತಿರುವಾಗ, ಅವುಗಳ ಕೆಲಸವನ್ನು ಬೆಂಬಲಿಸಲು Airbnb.org ಅವುಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಹಾಯ ಮಾಡುವುದು ಹೇಗೆ

ದೇಣಿಗೆ ನೀಡಿ
ನಿಮ್ಮ ದೇಣಿಗೆಯ 100% ಮೊತ್ತವನ್ನು ವೆನೆಜುವೆಲಾ ಭೂಕಂಪ ಮತ್ತು ಇತರ ವಿಪತ್ತುಗಳಿಂದ ಬಾಧಿತರಾದವರಿಗೆ ತುರ್ತು ವಸತಿಯನ್ನು ಒದಗಿಸಲು ಬಳಸಲಾಗುತ್ತದೆ.
FAQ
Airbnb.org ತುರ್ತು ವಾಸ್ತವ್ಯಕ್ಕೆ ನಾನು ಹೇಗೆ ಪ್ರವೇಶಾವಕಾಶ ಪಡೆಯಬಹುದು?
ಪ್ರಸ್ತುತ, ತುರ್ತು ನೆರವು ಕೋರುತ್ತಿರುವ ಜನರಿಗಾಗಿ Airbnb.org ನೇರ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಬದಲಿಗೆ, ತುರ್ತು ವಾಸ್ತವ್ಯಗಳ ಅಗತ್ಯವಿರುವ ಜನರನ್ನು ಹುಡುಕಲು Airbnb.org ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಲಾಭೋದ್ದೇಶರಹಿತ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಇನ್ನಷ್ಟು ತಿಳಿಯಿರಿ
Airbnb.org ಮೂಲಕ ವಾಸ್ತವ್ಯವನ್ನು ಬುಕ್ ಮಾಡಲು ಯಾರು ಅರ್ಹರು?
ವೆನೆಜುವೆಲಾದಲ್ಲಿ ಭೂಕಂಪಗದಿಂದ ಬಾಧಿತರಾದವರು Airbnb.org ಮೂಲಕ ತುರ್ತು ವಾಸ್ತವ್ಯವನ್ನು ಬುಕ್ ಮಾಡಲು ಅರ್ಹರಾಗಬಹುದು. ಅರ್ಹತೆಯನ್ನು ನಿರ್ಧರಿಸಲು ಸಹಾಯ ಮಾಡಲು ಸರ್ಕಾರಿ ಸಂಸ್ಥೆಗಳು ಮತ್ತು ಲಾಭೋದ್ದೇಶರಹಿತ ಪಾಲುದಾರರೊಂದಿಗೆ Airbnb.org ಕೆಲಸ ಮಾಡುತ್ತಿದೆ. ಇನ್ನಷ್ಟು ತಿಳಿಯಿರಿ
ನಾನು ನನ್ನ ಮನೆಯನ್ನು ಗೆಸ್ಟ್ಗಳಿಗಾಗಿ Airbnb ಯಲ್ಲಿ ಪೂರ್ಣ ದರದಲ್ಲಿ ಮತ್ತು ಅದರ ಜೊತೆಗೆ Airbnb.org ಮೂಲಕ ತುರ್ತುಪರಿಸ್ಥಿತಿಗಳ ಸಂದರ್ಭದಲ್ಲಿ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿಯೂ ಒದಗಿಸಬಹುದೇ?
ಹೌದು. ನೀವು ಒಂದು ಕ್ಯಾಲೆಂಡರ್ ಹೊಂದಿರುವುದರಿಂದ ಗೆಸ್ಟ್ಗಳು ನಿಮ್ಮ ಸ್ಥಳವನ್ನು ಎರಡು ಬಾರಿ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
Airbnb.org ನಿಂದ ಬುಕಿಂಗ್ ಬಂದಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
Airbnb.org ಮೂಲಕ ತುರ್ತು ವಾಸ್ತವ್ಯಕ್ಕಾಗಿ ರಿಸರ್ವೇಶನ್ ವಿನಂತಿಯನ್ನು ಮಾಡಿದಾಗ ಬುಕಿಂಗ್ ಪ್ರಕ್ರಿಯೆಯ ಸಂದರ್ಭದಲ್ಲಿ ಹೋಸ್ಟ್ಗಳಿಗೆ ಸೂಚಿಸಲಾಗುತ್ತದೆ.
ಗೆಸ್ಟ್ ಒಬ್ಬರ ವಾಸ್ತವ್ಯವು ಕೊನೆಗೊಂಡಾಗ ಏನಾಗುತ್ತದೆ?
ರಿಸರ್ವೇಶನ್ ದಾಖಲೆಯಲ್ಲಿದ್ದಂತೆ ಒಪ್ಪಿದ ಸಮಯದಲ್ಲಿ ಚೆಕ್ಔಟ್ ಮಾಡುವುದು Airbnb.org ಗೆಸ್ಟ್ಗಳ ಜವಾಬ್ದಾರಿಯಾಗಿದೆ. ಚೆಕ್ಔಟ್ ತಪ್ಪಿದಲ್ಲಿ, ಈ ನಿಟ್ಟಿನಲ್ಲಿ ನೆರವಾಗಲು ಗೆಸ್ಟ್ಗಳ ಜೊತೆ ಕೆಲಸ ಮಾಡುವ ಪರಿಣಿತ ಬೆಂಬಲ ಏಜೆಂಟ್ಗಳ ಮೀಸಲಾದ ತಂಡವನ್ನು Airbnb ಹೊಂದಿದೆ.
ನಾನು Airbnb ಹೋಸ್ಟ್ ಅಲ್ಲ, ಆದರೆ ನೈಸರ್ಗಿಕ ವಿಪತ್ತುಗಳ ಹಿನ್ನೆಲೆಯಲ್ಲಿ ನನ್ನ ಮನೆಯನ್ನು ಒದಗಿಸಲು ಬಯಸುತ್ತೇನೆ. ನಾನು ಏನು ಮಾಡಬೇಕು?
ನೀವು ಕೇವಲ Airbnb.org ಮೂಲಕ ಹೋಸ್ಟ್ ಮಾಡಲು ಸೈನ್ ಅಪ್ ಮಾಡಬಹುದು. ತುರ್ತು ವಾಸ್ತವ್ಯಗಳ ಅಗತ್ಯವಿರುವ ಗೆಸ್ಟ್ಗಳನ್ನು ಮಾತ್ರ ನೀವು ಹೋಸ್ಟ್ ಮಾಡುತ್ತೀರಿ ಮತ್ತು ನಿಮ್ಮ ಸ್ಥಳವನ್ನು ಉಚಿತವಾಗಿ ಒದಗಿಸುತ್ತೀರಿ ಎಂಬುದು ಇದರ ಅರ್ಥವಾಗಿದೆ. ತುರ್ತು-ಪರಿಸ್ಥಿತಿ ಅಲ್ಲದ ವಾಸ್ತವ್ಯಗಳಿಗೆ ಬುಕ್ ಮಾಡಲು ಗೆಸ್ಟ್ಗಳಿಗೆ ನಿಮ್ಮ ಸ್ಥಳ ಲಭ್ಯವಿರುವುದಿಲ್ಲ.
ನನ್ನ ದೇಣಿಗೆ ಯಾರಿಗೆ ಸಹಾಯ ಮಾಡುತ್ತದೆ?
Airbnb.org ಗೆ ನೀವು ನೀಡುವ ದೇಣಿಗೆಯನ್ನು ಭೂಕಂಪ ಅಥವಾ ಇನ್ನೊಂದು ಬಿಕ್ಕಟ್ಟಿನಿಂದಾಗಿ ವಾಸ್ತವ್ಯಕ್ಕಾಗಿ ಸ್ಥಳದ ಅಗತ್ಯವಿರುವ ಕುಟುಂಬಗಳು ಮತ್ತು ಪ್ರಥಮ ಪ್ರತಿಸ್ಪಂದಕರಿಗೆ ತುರ್ತು ವಸತಿಗಾಗಿ ಬಳಸಲಾಗುತ್ತದೆ.ನಿಮ್ಮ ದೇಣಿಗೆಯ 100% ಮೊತ್ತವನ್ನು ಬಾಧಿತರಿಗೆ ಉಚಿತ ತುರ್ತು ವಸತಿ ಒದಗಿಸಲು ಬಳಸಲಾಗುತ್ತದೆಯೇ ಹೊರತು ಕಾರ್ಯಾಚರಣೆಯ ವೆಚ್ಚಗಳಿಗೆ ಅಲ್ಲ. Airbnb.org ನ ಕಾರ್ಯಾಚರಣೆಯ ವೆಚ್ಚಗಳನ್ನು Airbnb ಭರಿಸುತ್ತದೆ. Airbnb.org ಲಾಭೋದ್ದೇಶರಹಿತ ಸಂಸ್ಥೆಯಾಗಿ 501(c)(3) ಅನ್ವಯ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.
ನಮ್ಮ ಸ್ಪಂದನೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.




